ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Showing posts with label ಚಿತ್ರಗುಚ್ಛ. Show all posts
Showing posts with label ಚಿತ್ರಗುಚ್ಛ. Show all posts

Friday, December 10, 2010

ಕೆಳದಿ ಕವಿ ಮನೆತನದ ಬಂಧು-ಬಳಗದ ದ್ವಿತೀಯ ವಾರ್ಷಿಕ ಸಮ್ಮೇಳನದ ಇನ್ನಷ್ಟು ಚಿತ್ರಗಳು

ಶ್ರೀಯುತ ನಾಗರಾಜ ಭಟ್, ಸೂರ್ಯನಾರಾಯಣರಾವ್, ಸಾ.ಕ.ಕೃಷ್ಣಮೂರ್ತಿ, ಕವಿವೆಂಕಟಸುಬ್ಬರಾವ್.

Monday, November 29, 2010

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ ಸಮಾವೇಶ -28-01-07.

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ ಸಮಾವೇಶ -28-01-07
ಸಮಾವೇಶದ ಕೆಲವು ದೃಶ್ಯಗಳು
ಕು. ಬಿ.ಎಸ್.ಆರ್. ಅಂಬಿಕಾಳಿಂದ ಪ್ರಾರ್ಥನೆ



ಚಿ. ಬಿ.ಎಸ್.ಆರ್. ದೀಪಕನಿಂದ ನಿರೂಪಣೆ


ಭಾಗವಹಿಸಿದವರು

ವಸ್ತುಪ್ರದರ್ಶನ ವೀಕ್ಷಣೆ
ಹಿರಿಯರಾದ ಕೆಳದಿ ಗುಂಡಾಜೋಯಿಸರ ಮಾರ್ಗದರ್ಶನ
ತಮ್ಮ ಕೃತಿ 'ಹಳೇಬೇರು-ಹೊಸಚಿಗುರು' ಕುರಿತು ಕವಿ ಸುರೇಶರ ನುಡಿ
ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿ ದಂಪತಿಗಳಿಗೆ ಸನ್ಮಾನ

ಸಂಬಂಧಗಳ ಅನ್ವೇಶಣೆಗೆ ನೆರವಾದ ಶ್ರೀ ಶೇಷಗಿರಿರಾಯರಿಗೆ ಸನ್ಮಾನ
ಕೆಳದಿ ಗುಂಡಾಜೊಯಿಸ್ ದಂಪತಿಗಳಿಗೆ ಗೌರವ
ಡಾ. ಕೆ.ವೆಂಕಟೇಶಜೋಯಿಸ್ ದಂಪತಿಗಳಿಗೆ ನೆನಪು
ಡಾ. ಕೆಳದಿ ಕೃಷ್ಣಾಜೋಯಿಸರಿಗೆ ನೆನಪಿನ ಉಡುಗೊರೆ
ಸಾ.ಕ.ಕೃಷ್ಣಮೂರ್ತಿಗಳಿಗೆ ಗೌರವ

ನಾಗರಾಜಭಟ್ ದಂಪತಿಗಳಿಗೆ ನೆನಪಿನ ಕಾಣಿಕೆ
ಕೆ.ರಾಮರಾಯರಿಗೆ ಗೌರವ
ಕೆಳದಿ ರಾಮಮೂರ್ತಿ ದಂಪತಿ
ಕೆ.ಶ್ರೀಕಂಠ
ವಿನೋದಾಬಾಯಿಯವರಿಗೆ ಸನ್ಮಾನ
ರಾಮರಾವ್ ದಂಪತಿಗಳು
ಕೆ.ವಿ.ಲಲಿತಾಂಬಾ

ಮಕ್ಕಳಿಂದ ಕವಿ ವೆಂಕಟಸುಬ್ಬರಾವ್ ದಂಪತಿಗಳಿಗೆ ಹೃದಯಸ್ಪರ್ಶಿ ಗೌರವ
ಜಾನಕಮ್ಮ
ಸಾ.ಕ.ಕೃಷ್ಣಮೂರ್ತಿಯವರ ಬಳಗ
ನಾಗರಾಜಭಟ್ಟರ ಬಳಗ
ವಿನೋದಾಬಾಯಿಯವರ ಬಳಗ
ಕವಿ ವೆಂಕಟಸುಬ್ಬರಾಯರ ಬಳಗ
ಭೋಜನ
ಭೋಜನದೊಂದಿಗೆ ಸಲ್ಲಾಪ

Friday, October 29, 2010

ಮಹಾಲಕ್ಷ್ಮಿ


ಕವಿ ನಾಗರಾಜ್, ಹಾಸನ, ಇವರು ಗಾಜಿನ ಮೇಲೆ ಪೇಯಿಂಟಿಂಗ್ ನಲ್ಲಿ ರಚಿಸಿದ ಮಹಾಲಕ್ಷ್ಮಿಯ ಚಿತ್ರ

Wednesday, October 27, 2010

ಕೆಳುವೆಯಲ್ಲಿ ಒಂದು ದಿನ

ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಿಂದ ಸುಮಾರು 8-10 ಕಿ.ಮೀ. ದೂರದಲ್ಲಿದೆ ಕೆಳುವೆ ಗ್ರಾಮ. ಅಲ್ಲಿನ ಈಶ್ವರ ದೇವಸ್ಥಾನದ ಅರ್ಚಕರಾಗಿರುವ ಗೋಪಾಲರವರನ್ನು (ಕವಿ ವೆಂಕಟಸುಬ್ಬರಾಯರ ತಂಗಿ ಸೀತಮ್ಮನವರ ಮಗ)  ಮಾತನಾಡಿಸಲು ಹಾಗೂ ದೇವಾಲಯ ನೋಡಲು ಕೆಲವು ತಿಂಗಳ ಹಿಂದೆ ಹೋಗಿದ್ದಾಗ ತೆಗೆದ ಚಿತ್ರಗಳು:
ಈಶ್ವರ ದೇವಾಲಯದ ಮುಂಭಾಗ ಹಾಗೂ ಅರ್ಚಕ ಶ್ರೀ ಗೋಪಾಲ

ದೇವಾಲಯದಲ್ಲಿರುವ ಆಕರ್ಷಕ ಬೃಹತ್ ಈಶ್ವರ ಲಿಂಗ

ಅರ್ಚಕರ ನಿವಾಸ

ಅರ್ಚಕರ ನಿವಾಸದಲ್ಲಿ ಕುಶಲೋಪರಿ
ಗೋಪಾಲ ದಂಪತಿಗಳು, ರೇಣುಕಾ ಸುರೇಶ್, ಸಾವಿತ್ರಮ್ಮ ರಾಮಮೂರ್ತಿ, ಭಾರತಿನಾಗರಾಜ್,
ಕೆಳದಿ ರಾಮಮೂರ್ತಿ, ಕವಿನಾಗರಾಜ್, ಕೆಳದಿ ವೆಂಕಟೇಶ ಜೋಯಿಸ್, ಕವಿ ಸುರೇಶ್.
     ಕೆಳದಿ ರಾಮಮೂರ್ತಿಯವರ ಸಹಕಾರದಿಂದ ಗೋಪಾಲ ದಂಪತಿಗಳು ಇಲ್ಲಿ ನೆಲೆಸಿದ್ದು ಗ್ರಾಮಸ್ಥರ ನೆರವಿನಿಂದ ದೇವಸ್ಥಾನ ಅಭಿವೃದ್ಧಿ ಕಾಣುತ್ತಿದೆ, ಕಾಣಬೇಕಿದೆ.
-ಕವಿನಾಗರಾಜ್.

Tuesday, October 26, 2010

ನಿವೃತ್ತಿಯಿಂದ ಪ್ರವೃತ್ತಿಯೆಡೆಗೆ

ದಿನಾಂಕ 31.12.09 ರಂದು ಕವಿ ನಾಗರಾಜ್ ('ಕವಿ ಕಿರಣ' ಪತ್ರಿಕೆಯ ಸಂಪಾದಕರು) ರವರು ತಮ್ಮ ಅಂಚೆ ಇಲಾಖೆ ಮತ್ತು ಕಂದಾಯ ಇಲಾಖೆಯ ಸುದೀರ್ಘ ಸೇವೆಯ ನಂತರ ಶಿವಮೊಗ್ಗೆಯಲ್ಲಿ ತಹಸೀಲ್ದಾರ್ ಆಗಿ ಸ್ವಯಂ ನಿವೃತ್ತಿ ಹೊಂದಿದರು. ಅಂದು ಅವರನ್ನು ವಿಶೇಷವಾಗಿ ಮನೆಗೆ ಬರಮಾಡಿಕೊಂಡು ಕುಟುಂಬಸ್ಥರು ಆತ್ಮೀಯವಾಗಿ ಅಭಿನಂದಿಸಿದ ಸಂದರ್ಭ.
[ಚಿತ್ರದಲ್ಲಿರುವವರು : ಶ್ರೀಮತಿ ಭಾರತಿ ನಾಗರಾಜ್, ಶ್ರೀ ಕವಿ ನಾಗರಾಜ್, ಶ್ರೀಮತಿ ರೇಣುಕಾಸುರೇಶ್, ಕು.ಅಂಬಿಕಾ, ಕವಿ ಸುರೇಶ್, ಚಿ.ದೀಪಕ್ ಮತ್ತು ಶ್ರೀಮತಿ ಸೀತಮ್ಮ ವೆಂಕಟಸುಬ್ಬರಾವ್]

Friday, October 22, 2010

ಕೆಳದಿ ಮ್ಯೂಜಿಯಂನಲ್ಲಿ ಕೆಳದಿ ಕವಿ ವಂಶವೃಕ್ಷ


ದಿನಾಂಕ ೩೦..೨೦೦೭ ರಂದು ಕೆಳದಿ ಮ್ಯೂಜಿಯಂನ್ನು ಕೆಳದಿ ಶ್ರೀ ಗುಂಡಾ ಜೊಯಿಸ್ ರವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಿದರು. ಅದೇ ಸಮಾರಂಭದಲ್ಲಿ ಕೆಳದಿ ಕವಿ ಮನೆತನದ ವಂಶ ವೃಕ್ಷದ ಪಟವನ್ನು ವಂಶದ ಹಿರಿಯರಾದ ಶ್ರೀ ಸಾ.ಕ.ಕೃಷ್ಣಮೂರ್ತಿರವರು ಶ್ರೀ ಕವಿ ನಾಗರಾಜ್ ಮತ್ತು ಶ್ರೀ ಕವಿ ಸುರೇಶ್ ರವರೊಡನೆ ಕೆಳದಿ ಮ್ಯೂಜಿಯಂನಲ್ಲಿಡುವ ಸಲುವಾಗಿ ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ.ಶೇರಿಗಾರ್ ರವರಗೆ ಹಸ್ತಾಂತರಿಸಿದ ಸಂದರ್ಭ.

Tuesday, October 19, 2010

60ನೇ ವರ್ಷದ ದಾಂಪತ್ಯ ವರ್ಷಾಚರಣೆ



















ಕವಿ ವೆಂಕಟಸುಬ್ಬರಾವ್ ರವರು ಕಾಲವಾಗುವುದಕ್ಕೆ ಸ್ವಲ್ಪ ತಿಂಗಳುಗಳ ಮುಂಚೆ ತಮ್ಮ ಮಕ್ಕಳ ಮತ್ತು ಬಂಧುಗಳ ಸಮಕ್ಷಮ ಶಿವಮೊಗ್ಗೆಯಲ್ಲಿ ತಮ್ಮ 60ನೇ ದಾಂಪತ್ಯ ಜೀವನದ ವಾರ್ಷಿಕ ಆಚರಿಸಿದ ಸಂದರ್ಭದಲ್ಲಿ ತೆಗೆದ ಚಿತ್ರ.

[ಚಿತ್ರದಲ್ಲಿ ಶ್ರೀಮತಿ ರೇಣುಕಾ ಸುರೇಶ್, ಶ್ರೀಮತಿ, ಶ್ರೀಮತಿ ಅನುಸುಯಾ, ಶ್ರೀಮತಿ ಪ್ರಭಾವತಿ ಗೋಪಾಲ್, ಚಿ.ದೀಪಕ್, ಕು.ಅಂಬಿಕಾ, ಶ್ರೀಮತಿ ಮತ್ತು ಶ್ರೀ ನಟರಾಜ್, ಶ್ರೀಮತಿ ಪದ್ಮ, ಶ್ರೀಮತಿ ಶ್ರೀಲತಾ, ಕವಿ ಸುರೇಶ್ ಮತ್ತು ಕವಿ ನಾಗರಾಜ್ ರವರನ್ನು ನೋಡಬಹುದು]

Monday, October 18, 2010

ಕೆಳದಿ ಕವಿಮನೆತನದ 5 ಮತ್ತು 6ನೆಯ ತಲೆಮಾರಿನವರು ವಾಸವಿದ್ದ ಮನೆ

     ಶಿವಮೊಗ್ಗ ಜಿಲ್ಲೆ ಸಾಗರದ ಗಣಪತಿ ದೇವಸ್ಥಾನದ ಬೀದಿಯಲ್ಲಿದ್ದ ಒಂದು ಮನೆಯಲ್ಲಿ ಕೆಳದಿ ಕವಿಮನೆತನದ 5ನೆಯ ಪೀಳಿಗೆಯ ಕವಿ ಕೃಷ್ಣಪ್ಪ - ಸುಬ್ಬಮ್ಮ ದಂಪತಿಗಳು ವಾಸವಿದ್ದರು. ಆ ಮನೆ ಈಗ ಹೀಗಿದೆ. ಈ ಮನೆಯನ್ನು ಕವಿಕುಟುಂಬದವರು ಶ್ರೀ ವೆಂಕೋಬರಾವ್ ಬಾಪಟ್ ಎಂಬುವವರಿಗೆ ಹಿಂದೆ ಮಾರಿದ್ದು, ಈಗ ಈ ಮನೆಯಲ್ಲಿ ಅವರ ಮಗ ಶ್ರೀ ಕೇಶವರಾವ್ ಬಾಪಟ್ ವಾಸವಾಗಿದ್ದಾರೆ. ಕವಿ ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳ ಬಗ್ಗೆ ಮಾಹಿತಿಯನ್ನು ಡಿಸೆಂಬರ್, 2010ರ 'ಕವಿಕಿರಣ' ಸಂಚಿಕೆಯಲ್ಲಿ ನಿರೀಕ್ಷಿಸಿರಿ.




ಈಗ ಈ ಮನೆಯಲ್ಲಿ ವಾಸವಿರುವ ಶ್ರೀ ಕೇಶವರಾವ್ ಬಾಪಟ್ ರವರು.
-ಕವಿನಾಗರಾಜ್.