ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Wednesday, April 16, 2014


RELEASE OF SIRIBHUVALAYASAGARA RATNAMANJUSHA [A BIRD'S EYE-VIEW OF KUMUDENDUMUNI'S SARVABHASHAMAYIBHASHA SIRIBHUVALAYA] - The Tenth Wonder of the World - BY PROF.G.VENKATASUBBAIAH AT HIS RESIDENCE ON 12.01.2014 IN BANGALORE

English Translation: KAVI SURESH, SHIMOGA


Sarvabhashamayibhasha Siribhuvalaya (the tenth Wonder of the World) is an ancient book written by Kumudendu Muni in Kannada numerals. The present book, 'Siribhuvalaya Sagararatnamanjusha' authored by Sri Sudharthi of Hassan is the 7th in the series. This introductory Book translated to English by Kavi Suresh of Shimoga gives a broad picture of all the books brought out by Sudharthi of Hassan on Siribhuvalaya. This is the only poetry in numerics (that too in Kannada) in the entire world and it has to be considered as an encyclopedia of the world. This contains about 16,000 pages; the volume of original Kannada verses in Siribhuvalaya is 6,00,000. The original author (Kumudendu Muni) states that by a systematic de-codification of this poetry in numerals one can get the literature of about 718 languages! This is really a challenging task to those who are genuinely keen to unearth its hidden treasure. Sri Sudharhi of Hassan has spent over 27 years on this work and has been able to present many of its hidden information within his own limits. He needs to be congratulated for this great effort. Those who are keen to pursue this further and who desire to have copies of his works may contact him on phone: 08172-257186 or Sri Kavi Suresh on phone: 08182-223670




ಸುಮಾರು 1200 ವರ್ಷಗಳಷ್ಟು ಹಿಂದಿನ ಜಗತ್ತಿನ ಏಕೈಕ ಕನ್ನಡ ಅಂಕಕಾವ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕುಮುದೇಂದು ಮುನಿಯ 'ಸಿರಿಭೂವಲಯ' ಲೋಕದ ಎಲ್ಲ ವಿಷಯಗಳ ಎಲ್ಲ ಸಾಹಿತ್ಯದ ಕಣಜ. ಅಂಕಗಳ ರೂಪದಲ್ಲಿ ಪ್ರಸ್ತುತವಾಗಿರುವ ಈ ಕಾವ್ಯವನ್ನು ವ್ಯವಸ್ಥಿತವಾಗಿ ಬಿಡಿಸಿದಾಗ ಅನೇಕ ಭಾಷೆಗಳ ಸಾಹಿತ್ಯವು ಹೊರಬರುವುದು ಹಾಸನದ ಶ್ರೀ ಸುಧಾರ್ಥಿಯವರ ಸುಮಾರು 27 ವರ್ಷಗಳ ಕಾಲದ ಸಂಶೋಧನೆಯಿಂದ ದೃಢಪಟ್ಟಿದೆ. ಇದರಲ್ಲಿ ಸುಮಾರು 718 ಭಾಷೆಗಳ ಸಾಹಿತ್ಯ ಅಡಕವಾಗಿದ್ದು, ಅದನ್ನು ಹೊರತೆಗೆಯಲು ಅಷ್ಟು ಭಾಷೆಗಳಲ್ಲಿ ಪರಿಣತರಾದ ಆಸಕ್ತರ ಅವಶ್ಯಕತೆಯಿದೆ. ಈ ಕೃತಿಯ ಪರಿಚಯವನ್ನು ಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ಶ್ರೀ ಸುಧಾರ್ಥಿಯವರು ಸುಮಾರು 7 ಪರಿಚಯ ಕೃತಿಗಳನ್ನು ರಚಿಸಿದ್ದಾರೆ. ಸಂಕ್ಷಿಪ್ತವಾಗಿ ಈ ಎಲ್ಲ ಕೃತಿಗಳ ಸಾರಾಂಶವನ್ನು ಶ್ರೀ ಸುಧಾರ್ಥಿಯವರ ಅಪೇಕ್ಷೆಯ ಮೇರೆಗೆ ಶಿವಮೊಗ್ಗೆಯ ಕೆಳದಿ ಕವಿ ಮನೆತನದ ಶ್ರೀ ಕವಿ ಸುರೇಶ್ ರವರು ಆಂಗ್ಲ ಭಾಷೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಈ ಆಂಗ್ಲ ಭಾಷೆಯ ಸಿರಿಭೂವಲಯದ ಪುಸ್ತಕವನ್ನು ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯನವರು ತಮ್ಮ ಸ್ವಗೃಹದಲ್ಲಿ ದಿ.12.1.2014 ರಂದು ಬಿಡುಗಡೆ ಮಾಡಿದ್ದಾರೆ. ಅದೇ ಸಮಯದಲ್ಲಿ ಸುಧಾರ್ಥಿಯವರ 'ಸಿರಿಭೂವಲಯಸಾಗರರತ್ನಮಂಜೂಷ-2' ಸಹ ಅವರ ಅಮೃತ ಹಸ್ತದಿಂದ ಬಿಡುಗಡೆಯಾಯಿತು. ಸುಧಾರ್ಥಿಯವರ ಪರಿಶ್ರಮವನ್ನು ಮತ್ತು ಆಂಗ್ಲಭಾಷೆಯ ಅವತರಣಿಕೆಯ ಮೂಲಕ ಇದರ ಕಂಪನ್ನು ಕನ್ನಡ ಭಾಷೇತರರಿಗೂ ತಿಳಿಸುವ ಈ ಸುಪ್ರಯತ್ನವನ್ನು ಶ್ರೀ ವೆಂಕಟಸುಬ್ಬಯ್ಯನವರು ಈ ಸಂದರ್ಭದಲ್ಲಿ ಮುಕ್ತಕಂಠದಿಂದ ಅಭಿನಂದಿಸಿದರು.[ಪುಸ್ತಕಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಶ್ರೀ ಸುಧಾರ್ಥಿ (Hassan) (08172-257186 ಅಥವಾ ಶ್ರೀ ಕವಿ ಸುರೇಶ್ (Shimoga) [08182-223670] ರವರನ್ನು ಸಂಪರ್ಕಿಸಬಹುದಾಗಿದೆ.








No comments:

Post a Comment