ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, April 4, 2011

ದಿ. ಕವಿ ಸುಬ್ರಹ್ಮಣ್ಯಯ್ಯರವರ ಪಂಚಾಂಗ ಶ್ರವಣ ಪ್ರಸಂಗ


                                                                      (1904-1966)
         ಜ್ಯೋತಿಷ್ಯದ ಗಂಧವಿಲ್ಲದಿದ್ದರೂ ಅಲ್ಪ ಕಾಲದಲ್ಲಿ ಅಧ್ಯಯನ ಮಾಡಿ ಯುಗಾದಿ ಫಲವನ್ನು ದಿ. ಕವಿ ಸುಬ್ರಹ್ಮಣ್ಯಯ್ಯ ಸಿದ್ಧಪಡಿಸಿ ಪಂಚಾಂಗ ಶ್ರವಣ ಮಾಡಿದ ಪ್ರಸಂಗವನ್ನು ಈ ಯುಗಾದಿಯ ಸಂದರ್ಭದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಅವರ ಅಧ್ಯಯನಶೀಲತೆ, ಪ್ರಸಂಗಾವಧಾನ, ಸಮಯ ಪ್ರಜ್ಞೆಗಳಿಗೆ ಈ ಸಂಗತಿ ಸಾಕ್ಷಿಯಾಗಿದೆ.

     ದಿನಾಂಕ ೨೯-೩-೧೯೪೮ರಂದು ಕೆಳದಿಯ ಶ್ರೀ ಗುಂಡಾಜೋಯಿಸರ ತಂದೆಯವರು ೫೨ನೆಯ ವಯಸ್ಸಿಗೇ ವಿಧಿವಶರಾದಾಗ ಗುಂಡಾಜೋಯಿಸರಿಗೆ ಕೇವಲ ೧೭ ವರ್ಷ ವಯಸ್ಸು. ಅವರಿಗೆ ದಿಕ್ಕೇ ತೋಚದಂತಾಗಿತ್ತು. ಅವರ ಸಹೋದರಿಯರಿಗೆ ವಿವಾಹವೂ ಆಗಿರಲಿಲ್ಲ. ಸಹೋದರನಿಗೆ ಉಪನಯನವೂ ಆಗಬೇಕಾಗಿದ್ದು ನಿಂತು ಹೋಗಿತ್ತು.  ಇನ್ನೂ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು ಮುಂದಿನ ವಿದ್ಯಾಭ್ಯಾಸದ ಸಮಸ್ಯೆಗಳೂ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ಕವಿ ಸುಬ್ರಮಣ್ಯರವರು ಕೆಳದಿಯಲ್ಲೇ ಇದ್ದು, ಅವರಿಗೆಲ್ಲಾ ಮಾರ್ಗದರ್ಶಕರಾಗಿ ರಕ್ಷಿಸಿದುದನ್ನು ಅವರು ಇಂದಿಗೂ ನೆನೆಸಿಕೊಳ್ಳುತ್ತಾರೆ. ಅವರ ತಂದೆಯವರು ಫಾಲ್ಗುಣ ಬಹುಳ ಪಂಚಮಿಯಂದು ಮೃತರಾಗಿದ್ದು ಯುಗಾದಿ ಹಬ್ಬದ ಹಿಂದಿನ ದಿನಕ್ಕೆ  ಕರ್ಮಗಳೆಲ್ಲವೂ ಮುಗಿಯಿತು. ಕೆಳದಿ ದೇವಸ್ಥಾನದಲ್ಲಿ ಯುಗಾದಿಯಂದು ಪಂಚಾಂಗ ಶ್ರವಣ ನಡೆಯಬೇಕಾಗಿತ್ತು. ಈ ಪದ್ಧತಿ ನಿಲ್ಲಬಾರದೆಂದು ಸುಬ್ರಮಣ್ಯಯ್ಯನವರು ಹಳೆಯ ಕಾಗದ ಪತ್ರಗಳನ್ನೆಲ್ಲಾ ಜಾಲಾಡಿಸಿ ಯುಗಾದಿ ಫಲದ ಕಡತವನ್ನು ಆಮೂಲಾಗ್ರವಾಗಿ ಅಭ್ಯಸಿಸಿ, ಪಂಚಾಂಗ ಶ್ರವಣವನ್ನು ತಮ್ಮ ಸ್ವಹಸ್ತಾಕ್ಷರದಿಂದಲೇ ಸಿದ್ಧಪಡಿಸಿ ನಡೆಸಿಕೊಟ್ಟುದು ಈಗ ಇತಿಹಾಸ. ಸುಬ್ರಮಣ್ಯಯ್ಯ ಬರೆದ ಯುಗಾದಿಫಲ ಹಸ್ತಪ್ರತಿಯ ಕೆಲವು ಸಾಲುಗಳು:
     ಶುಭಮಸ್ತು|| ನಿರ್ವಿಘ್ನಮಸ್ತು|| ಸ್ವಸ್ತಿ ಶ್ರೀ ಜಯಾಭ್ಯುದಯ ನೃಪ ಶಾ.ಶ. ವರುಷ ೧೮೭೧ನೇ ಸರ್ವಧಾರಿನಾಮ ಸಂವತ್ಸರದ ಮಧ್ಯ ಮೇಷ ಸಂಕ್ರಾಂತಿಗೆ ಸಂದ ಶಾಲಿವಾಹನ ಶಕ ವರ್ಷ ೧೮೭೦ ಕಲಿವರ್ಷ ೫೦೫೦ ಕಲಿದಿನ ೧೮೪೪೧೮೬ ಧನಾಯನಾಂಶಃ
     ಅಥ ಸಂವತ್ಸರಸ್ಯ ರಾಜಾನಾಂ ಫಲಾನ್ಯುಚ್ಯಂತೇ ರಾಜಾ ಮಂದೋ ಕುಜೋರ್ ಮಂತ್ರೀ ಸೇನಾನಾಮಂ ಶಶಿಃ ಸಸ್ಯಾನಾಂ ಶುಕ್ರೋ ಧಾನ್ಯಾನಾಮ ಬುಧಃ ಅರ್ಘಾಣಾಮಂ ಚಂದ್ರೋ ಮೇಘಾಣಾಮಂ ಶಶಿಃ ರಸಾನಾಮಂ| ಅರ್ಕೊ ನಿರಸಾಧಿಪತಿ ಗುರು ಅಶ್ವಾನಾಮಂ ಮದಿತೋ ಮಂದೋ ಗಜಾನಾಮಂ| ಮಂ| ಕುಜಃ ಪಶುನಾಮಂ ಬಲರಾಮ ಭಾಗಾನಾಮಂ ಶನಿ ಮಹಿಷ್ಯಾಧಿಪತಿ ರವಿಃ ಉಷ್ಟ್ರಾನಾಮಂ ಶುಕ್ರೋ ದ್ರವ್ಯಾಣಾಂ ಮ| ಸೂರ್ಯೋ ಮೃಗಾಣಾಂ ಮಂ ಬುಧಃ ಸರ್ಪಾಣಾಂ ಮಂ ಚಂದ್ರೋ ವಸ್ತ್ರಾಣಾಂ ಮ ಮಂದೋ . . . ನಾಮಂ ಚಂದ್ರೋ ನಿರಸಾಧಿಪತಿರ್ರವಿಃ ಸ್ತ್ರೀಣಾಂಚಾಧಿಪತಿಶ್ಚಂದ್ರೋ ಯುದ್ದಾನಾಂ ಮ| ಶಶಿ| ಆಜ್ಞಾನಾಂ ಮಂ ಜೀಪೋವ್ಯವಹಾರಾದಿಪ ಶನಿಃ ವ್ಯಾಪಾರಾಧಿಪತಿರ್ಭಾನೋ ಕೋಶಾನಾಮಧಿಪತಿಶ್ಶನಿಃ ಮಾಂಗಲ್ಯಾಧಿಪತಿಃ ಸೂರ್ಯೋ ನರಾನಾಂ ಮ ಗುರುಃ| ವ್ಯಾಘ್ರಾಣಾಂ ಮ | ಸೌಮ್ಯೋ ವೃಕ್ಷಾಣಾಮ ಶಶಿ ಖಗಾನಾಮಶ್ಚಂದ್ರೋ . . . . . ಪತಯಕ್ರಮಾತ್|| ವಿಂಧ್ಯೋತ್ತರೇ ಗುರೋರ‍್ಮಾನೇ ವಿಕಾರಿ ನಾಮ ಸಂವತ್ಸರೇ ವರ್ತಮಾನೇ . . . . ಸರ್ವತ್ರ ಬಹು ಸಸ್ಯಾರ್ಘ ವೃದ್ಧಾಯಃ||
     ಈ ಸಂವತ್ಸರದಲ್ಲಿ ರಾಜರು ಪ್ರಜೆಗಳನ್ನು ಪಾಲನೆ ಮಾಡುವುದರಲ್ಲಿ ನಿರತರಾಗಿಯೂ ವಿರೋಧವಿಲ್ಲದವರಾಗಿಯೂ ಇರುವರು. ಬೆಳಸು ಚೆನ್ನಾಗಿದ್ದರೂ ಕ್ರಯವು ಹೆಚ್ಚು. ಶನೇ ರಾಜತ್ವ ಫಲಂ|| ಮಧ್ಯಾನಿ ಸಸ್ಯಾನಿ ವಿಚಿತ್ರ ವೃಷ್ಟಿಶ್ಚೋರಾಮಯಮೋದ್ಧಕರಾಜಕೋಪಃ| . . . . ಶನಿಯು ರಾಜನಾಗಿರುವುದರಿಂದ ಸಸ್ಯಗಳು ಮಧ್ಯಮವಾಗುತ್ತವೆ. ಮಳೆಯು ವಿಚಿತ್ರವಾಗಿರುತ್ತದೆ. ಕಳ್ಳರ ಭೀತಿ, ರೋಗಭಾಧೆ ಮತ್ತು ರಾಜರಲ್ಲಿ ಕೋಪಗಳು ಹೆಚ್ಚಾಗಿರುತ್ತವೆ. ಹೈನು, ಬೆಳಸು ಮತ್ತು ಚಿಲ್ಲರೆ ಧಾನ್ಯಗಳು ಚೆನ್ನಾಗಿ ಫಲಿಸುತ್ತವೆ. ಕುಜಸ್ಯ ಮಂತ್ರಿತ್ವ ಫಲಂ| ದಹನ ಪ್ರಹರಣ ಶಂಭರ ಮರುದಾಮಯ ಭೀತಿರ ಕುಳಸ್ಯಾತ್| ಕ್ಷಿತಿತನಯ ಸತಿಮಂತ್ರಿಣಿ ಪೂಷಂ ಸಮುಪೈತಿ ಸರ್ವಸಸ್ಯಚಯ| ಕುಜನು ಮಂತಿಯಾಗಿರುವುದರಿಂದ ಜನರಿಗೆ ಅಗ್ನಿ ಆಯುಧ ನೀರು ಗಾಳಿ ರೋಗ ಇವುಗಳಿಂದ ಹೆಚ್ಚಾದ ಭೀತಿಯುಂಟಾಗುತ್ತದೆ. ಎಲ್ಲಾ ಪೈರುಗಳು ವಣಗುತ್ತವೆ. ಚಂದ್ರಸ್ಯ ಸೇನಾಧಿಪತಿತ್ವ ಫಲಂ|| . . . . .ಚಂದ್ರನು ಸೇನಾಧಿಪತಿಯಾಗಿರುವುದರಿಂದ ಮೇಘಗಳು ಭೂಮಿಯಲ್ಲಿ ಮಳೆಯನ್ನು ಸುರಿಸುತ್ತವೆ. ಧಾನ್ಯಗಳಿಗೆ ಬೆಲೆಯು ಹೆಚ್ಚಾಗುತ್ತದೆ. ಪ್ರಜೆಗಳು ಸುಖಿಗಳಾಗಿರುತ್ತಾರೆ. ಗೋವುಗಳು ಹೆಚ್ಚಾಗಿ ಹಾಲನ್ನು ಕೊಡುತ್ತವೆ. . . . ಗುರೋಃ ನೀರಸಾಧಿಫಲಂ|| ಹರಿದ್ರಾ ಪೀತ ವರ್ಣಾನಾಂ ವಸ್ತ್ರಾದೀನಾಂ ತಥೈವಚ|| . . . ಗುರುವು ನೀರಸಾಧಿಪತಿಯಾಗಿರುವುದರಿಂದ ಅರಿಸಿನ ಹಳದೀ ಬಣ್ಣದ ವಸ್ತ್ರಗಳು ಬಟ್ಟೆಗಳು ಸಮೃದ್ಧಿಯಾಗುತ್ತದೆ. ಈ ವರ್ಷ ಬಟ್ಟೆ ಕಂಟ್ರೋಲ್ ಹೋಗುತ್ತದೆ. . . .  ಅಥ ಗುರುಚಾರ ಫಲಂ|| . . . . ಗುರು ಮೂರು ರಾಶಿ ಎಂದರೆ ವೃಶ್ಚಿಕ ಧನುಸ್ಸು ಮಕರ ರಾಶಿಗಳಲ್ಲಿ ಸಂಚರಿಸುವುದರಿಂದ ಭೂಮಿಯು ಏಳು ಕೋಟಿ ಹೆಣಗಳಿಂದ ಕೂಡಿದ್ದಾಗಿರುತ್ತದೆ. ಅಂದರೆ ಪ್ರಪಂಚದಲ್ಲಿ ಏಳು ಕೋಟಿ ಪ್ರಜಾನಾಶವಾಗುವುದು. . . . (ಸುಮಾರು ಮೂರು ದೊಡ್ಡ ಪುಟಗಳಾಗುವಷ್ಟು ಉಗಾದಿ ಫಲ ಬರೆದಿದ್ದು ಸ್ವಲ್ಪ ಮಾತ್ರ ಇಲ್ಲಿ ಮಾಹಿತಿಗಾಗಿ ದಾಖಲಿಸಿದೆ).

*********************
ಶ್ರೀ ಸುಬ್ರಹ್ಮಣ್ಯಯ್ಯನವರ ಸ್ವಹಸ್ತಾಕ್ಷರದ ಯುಗಾದಿಫಲದ  ಪ್ರತಿ:

************************************

 

4 comments:

  1. ಕವಿ ನಾಗರಾಜರೇ, ನಮ್ಮೂರಲ್ಲಿ ನಾವು ಬಗ್ಗೋಣ ಪಂಚಾಂಗವನ್ನು ಉಪಯೋಗಿಸುತ್ತೇವೆ, ಹಿಂದಕ್ಕೆ ರಾಜರ ಕಾಲದಲ್ಲಿ ಮಾಧವ ಪಂಡಿತರೆಂಬವರು ಅದನ್ನು ಬರೆಯುತ್ತಿದ್ದರಂತೆ. ಅವರ ಚಿಕ್ಕ ಮಗನೊಬ್ಬ ಅಡ್ಡಾಡುತ್ತಾ ತಂದೆಯಿಲ್ಲದಾಗ ಅರಮನೆಯ ಆವರಣಕ್ಕೆ ಬಂದಿದ್ದನಂತೆ, ಅಲ್ಲಿಯೇ ತಿರುಗಾಡುತ್ತಿದ್ದ ರಾಜರು ಅವನನ್ನು ಪ್ರಶ್ನಿಸಿದಾಗ ಏಕಾದಶಿಗೆ ಗ್ರಹಣ ಎಂದುಬಿಟ್ಟನಂತೆ! ಅದನ್ನೇ ಹಿಡಿದು ಗೇಲಿಮಾಡಿದಾಗ ಅವಹೇಳನ ಸಹಿಸಲಾರದ ಮಾಧವ ಪಂಡಿತರು ತನ್ನ ಅಖಂಡ ತಪಸ್ಸಿನಿಂದ ಏಕಾದಶಿಯ ದಿನ ರಾಜನಿಗೆ ಗ್ರಹಣ ತೋರಿಸಿದರಂತೆ, ಅದಲ್ಲದೆ ಜ್ಯೋತಿಷದಲ್ಲಿ 'ಮುಹೂರ್ತ ಮಾಧವೀಯ ' ಎಂಬ ಗ್ರಂಥವನ್ನೂ ಅವರು ಬರೆದಿದ್ದಾರೆ. ಇದು ಇತಿಹಾಸ, ಇಂದು ಅವರ ವಂಶಸ್ಥರು ಪಂಚಾಗ ಬರೆಯುತ್ತಾರೆ. ನಮ್ಮಲ್ಲಿ ಪಂಡಿತರನ್ನೆಲ್ಲಾ ಗುರೂಜಿ ಗುರೂಜಿ ಎಂದು ಕರೆಸಿಕೊಳ್ಳುವುದಿಲ್ಲ! ಪಂಡಿತರೇ ಬೇರೆ ಗುರುಗಳೇ ಬೇರೆ. ನಿಮ್ಮ ಲೇಖನ ಹೊಸ ವಿಚಾರವೊಂದನ್ನು ತೋರಿಸಿತು, ಇಷ್ಟವಾಯಿತು.

    ReplyDelete