ತಾಳ: ಮಿಶ್ರಛಾಪು ರಾಗ: ದೇಶೀ
ಎಲ್ಲಿ ಕಲಿತೆಯೋ ಇಂಥಾ ಜಾಲೆಗಳನು ಆ
ಲಲ್ಲೆಗಾರತಿಯ ಕೂಡಾಡಿ ಬಂತದಕೇನು || ಪ ||
ಅವಳ ಕುರುಳಿವಳ ಮುಗುಳ್ನಗೆಯನೆ ಬಯಸುವುದು
ಇವಳ ನಯನಗಳವಳ ಮುದ್ದು ಮೊಗವಾ
ಅವಳಕ್ಷಿ ಇವಳ ತೊಳ್ಗಳನೆಂದು ನಿನ್ನ ಸಖಿ
ವಿವರಿಸಿ ಬರೆದುದ ನೀನೋಡಿದುದ ಸಖಿ ಪೇಳ್ದ || 1 ||
ತರುಣಿ ಹಾರವನು ಮತ್ತೋರ್ವಳುಂಗುರವನು
ಸರ್ವಾಭರಣವ ಧರಿಸಿದಳೋರ್ವಳು
ಭರದಿ ಮೂವರೊಳಗಾರನು ಕಳುಹಲೆಂದು ಸಖಿ
ಬರೆಯಲದ ನೀನೋಡಿಕೊಂಡುದನೆ ಸಖಿ ಪೇಳ್ದ || 2 ||
ಇನ್ನಾದರೆಯು ಪರಸತಿಯರ ಬೇಟವ ಬಿಟ್ಟು
ನಿನ್ನ ನಂಬಿದಳೆಂದು ಮನಕೆ ತಂದು
ಎನ್ನ ಕರದೊಳಗೆ ಕರವಿಟ್ಟು ಮನ್ನಿಸೋ ಕೆಳದಿ
ಪನ್ನಗಾಭರಣ ಶ್ರೀ ರಾಮೇಶಲಿಂಗ || 3 ||
No comments:
Post a Comment