ರಾಗ || ಸುರುಟಿ - ತಾಳ || ಆದಿ
ಸುಖವಾದರು ಬರಲಿ
ಈಕ್ಷಣ ದು:ಖವಾದರು ಬರಲಿ
ಅಕಲಂಕ ಚರಿತನು ಸಕಲ
ರಕ್ಷಕನು ಮಕರಾಂಕರಿಪು ಶಿವ
ಸಖನಾಗಿರುತಿರೆ || ಪ ||
ಬಾಳಬಲ್ವನೆನಲಿ
ಮೂರ್ಖನು ಖೂಳನು ಇವನೆನಲಿ
ಕಾಲಕಾಲ ಕರುಣಾಲವಾಲನ
ನೀಲಕಂಠನ ನಾಮ ನಾಲಗೆಯಲ್ಲಿರೆ || 1 ||
ನಿಂದಿಸಿದವರುಗಳು
ಗುರುಗಳು ಬಂಧು ಬಾಂಧವರವರು
ಸಿಂಧುರ ಬಂಧುರ ಚರ್ಮಾಂಬರನ-
ರ್ಧೇ ಂದುಮೌಳಿ ತಾ ಬಂದು ರಕ್ಷಿಸುತಿರೆ || 2 ||
ದೊರೆ ಮುನಿದರೇನು
ಮರ್ತ್ಯರು ಜರೆದು ನುಡಿದರೇನು
ಸುರರು ದಾನವರು ಮುನಿದರಂಜುವೆನೆ
ವರ ಕೆಳದಿಯ ರಾಮೇಶ್ವರನು ರಕ್ಷಿಸುತಿಹರೆ || 3 ||
No comments:
Post a Comment