ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, July 29, 2014

KAVI PRAKASHANA, SHIMOGA

Release  of the first Book in the Series "Pathyaurveda"

On 21.7.2014, Smt.Kamakshamma (Maami) w/o Dr.Kudali Jagannatha Shastry released the first series book - "Tambuli, Chatnipudi, Kayirasagalu" authored by Smt.Renuka Suresh in the
Office of the Kavi Prakashana before a select audience.

The Book lists out certain above preparations keeping in view the health, taste and building up of the over all internal resistance power of individual to diseases. It includes a few important tips on home remedies also.

ಆರೋಗ್ಯ, ರುಚಿ ಮತ್ತು ಸರಳವಾದ ಖಾದ್ಯಗಳನ್ನು, ಅದರಲ್ಲೂ ವಿಶೇಷವಾಗಿ ಆಯುರ್ವೇದ ಶಾಸ್ತ್ರವು ಸಮ್ಮತಿಸಿದ ರೀತಿಯಲ್ಲಿ ಪ್ರಸ್ತುತ ಪಡಿಸಲು ತನ್ಮೂಲಕ ದೇಹದ ಆಂತರಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹಲವು ತೊಂದರೆಗಳಿಗೆ ಶಮನಕಾರಿಯಾದಂತಹ ಕೆಲವು ಪಾಕವಿಧಾನಗಳನ್ನು ಹಂತಹಂತವಾಗಿ "ಪಥ್ಯಾಯುರ್ವೇದ" ಎಂಬ ಮಾಲಿಕೆಯಲ್ಲಿ ಪ್ರಕಟಪಡಿಸಲು ಕವಿ ಪ್ರಕಾಶನವು ಉದ್ದೇಶಿಸಿದೆ.

ಆದರಂತೆ ಅದರ ಪ್ರಥಮ ಮಾಲಿಕೆಯಾಗಿ ಶ್ರೀಮತಿ ರೇಣುಕಾ ಸುರೇಶ್ ರವರು ಸಿದ್ಧಪಡಿಸಿರುವ "ತಂಬುಳಿ, ಚಟ್ನಿಪುಡಿ, ಕಾಯಿರಸಗಳು" ಎಂಬ ಪುಸ್ತಕವನ್ನು ದಿನಾಂಕ 21.07.2014 ರಂದು ಶಿವಮೊಗ್ಗದ ಕವಿ ಪ್ರಕಾಶನದ ಕಛೇರಿಯಲ್ಲಿ ಶಿವಮೊಗ್ಗೆಯ ಶ್ರೀ ಕಾಮಾಕ್ಷಮ್ಮ (ಮಾಮಿ) - ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಯವರ ಪತ್ನಿ - ರವರು ಬಿಡುಗಡೆ ಮಾಡಿದರು.

ಇಲ್ಲಿ ವಿವರಿಸಿದಂತಹ ಆಹಾರ-ವ್ಯಂಜನಗಳನ್ನು ದಿನನಿತ್ಯದಲ್ಲಿ ಅಳವಡಿಸಿಕೊಳ್ಳುವುದರಿಂದ ಸಮಗ್ರ ಪರಿಣಾಮ ಕಂಡುಕೊಳ್ಳಲು ಸಾಧ್ಯ. ಪಾರಂಪರಿಕ ಛಾಯೆ ಮತ್ತು ವಿನೂತನತೆ ಈ ಪುಸ್ತಕದ ವಿಶೇಷ.ದಿಢೀರ್ ಆಗಿ ತಯಾರಿಸಿಕೊಳ್ಳಬಹುದಾದ ಈ ವ್ಯಂಜನಗಳ ವಿವರಣೆ ಜೊತೆಗೆ ಆಯುರ್ವೇದದ ಕೆಲವು ಔಷಧೀಯ ಗುಣಗಳನ್ನೂ ಮತ್ತು ಮನೆ ಮದ್ದುಗಳನ್ನೂ ಪರಿಚಯ ಮಾಡಿಕೊಡುವ ಈ ಪುಸ್ತಕ ಎಲ್ಲರ ಮನೆಯ - ಅಡುಗೆ ಮನೆಯ - ಸಂಗ್ರಹದಲ್ಲಿರಲೇಬೇಕು.

ಪ್ರಕಟಣಾ ವರ್ಷ: 2014 : ಪುಟಗಳು-60 : ಬೆಲೆ ರೂ.50/-

ISBN 978-93-5174-680-5
Cover Page of the Book

Book release : Smt.Geeta Diwakar, Smt.Renuka Suresh (author), Smt.Kamakshamma (Maami),
Kavi Suresh and Dr.BSR Deepak
Those desirous of obtaining this book may contact: 94489-32866 - 94805-44164 - 944850-09763

No comments:

Post a Comment