ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, December 7, 2010

ಕೆಳದಿ ಕವಿ ಮನೆತನದ ಬಂಧು-ಬಳಗದ ವಾರ್ಷಿಕ ಸಮ್ಮೇಳನದ ವರದಿ

ದ್ವಿತೀಯ ವಾರ್ಷಿಕ ಸಮಾವೇಶ - ೨೫-೧೨-೨೦೦೭
     ಕೆಳದಿಯ ಶ್ರೀ ರಾಮಮೂರ್ತಿ ಮತ್ತು ಸಹೋದರರ ಪ್ರಾಯೋಜಕತ್ವದಲ್ಲಿ ಕೆಳದಿಯಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಎರಡನೆಯ ಸಮಾವೇಶ ಸಹ ಅವಿಸ್ಮರಣೀಯ ಅನುಭವವನ್ನು ಭಾಗವಹಿಸಿದ ಎಲ್ಲ ಬಂಧುಗಳಿಗೆ ನೀಡಿತು. ಬಂಧುಗಳು ಸಾಕ್ಷೀಕರಿಸಿದ ನಡಾವಳಿ ಹೀಗಿತ್ತು:
೧. ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭ

ಕೆಳದಿ ಶ್ರೀ ಆಂಜನೇಯ ಸ್ವಾಮಿ

ಜ್ಯೋತಿ ಬೆಳಗಿ ಉದ್ಘಾಟನೆ

೨. ಶ್ರದ್ಧಾಂಜಲಿ: ಕಳೆದ ಸಾಲಿನಲ್ಲಿ ನಿಧನರಾದ ಶ್ರೀ ರಾಮಾಜೋಯಿಸ್, ನಿವೃತ್ತ ತಹಸೀಲ್ದಾರರು (ಶ್ರೀ ಗುಂಡಾಜೋಯಿಸರ ಸಹೋದರ) ಮತ್ತು ಶ್ರೀಮತಿ ರತ್ನಮ್ಮ ಸುಂದರರಾವ್ (ಶ್ರೀ ದಿ. ಸಾ.ಕ. ಲಿಂಗಣ್ಣಯ್ಯನವರ ಮಗಳು, ಖ್ಯಾತ ಸಾಹಿತಿ ದಿ. ಶ್ರೀ ಬ.ನ. ಸುಂದರರಾವ್ ರವರ ಪತ್ನಿ) ರವರಿಗೆ ಮೌನ ಆಚರಿಸಿ ಸ್ಮರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
೩. ಕವಿ ಮನೆತನದ ಹಿರಿಯ ಸಾಧಕ ಸಾಗರದ ಕವಿ ಲಿಂಗಣ್ಣಯ್ಯರ ಜೀವನ ಚರಿತ್ರೆಯನ್ನು ಆಂಗ್ಲ ಭಾಷೆಯಲ್ಲಿ ಶ್ರೀ ಕವಿ ವೆಂ. ಸುರೇಶರವರು ರಚಿಸಿದ್ದು ಕರ್ಮಯೋಗಿ ಕಲಾವಲ್ಲಭ ಎಸ್.ಕೆ. ಲಿಂಗಣ್ಣಯ್ಯ ಎಂಬ ಹೆಸರಿನ ಈ ಪುಸ್ತಕದ ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಸೂರ್ಯನಾರಾಯಣರಾವ್‌ರವರು ಕವಿ ಮನೆತನದ ಹಿರಿಮೆಯನ್ನು ಎತ್ತಿಹಿಡಿದ ಸಾಧಕರ ಪರಿಚಯವನ್ನು ಮಾಡಿಕೊಡುವ ಈ ಕೆಲಸ ಸ್ತುತ್ಯಾರ್ಹವೆಂದರು.

ಕವಿ ಸುರೇಶರ 'ಕರ್ಮಯೋಗಿ ಕಲಾವಲ್ಲಭ ಲಿಂಗಣ್ಣಯ್ಯ' ಕೃತಿ ಬಿಡುಗಡೆ
ವೇದಿಕೆಯಲ್ಲಿ: ನಾಗರಾಜಭಟ್, ಸೂರ್ಯನಾರಾಯಣರಾವ್, ಸಾ.ಕ. ಕೃಷ್ಣಮೂರ್ತಿ, ಕವಿವೆಂಕಟಸುಬ್ಬರಾವ್.


ಲೇಖಕ ಕವಿ ಸುರೇಶರ ನುಡಿ

೪. ಸ್ವರಚಿತ ಕವನಗಳನ್ನು ರಚಿಸಿ ಹಾಡಿದ ಅನೇಕ ಬಂಧುಗಳು ಸಮಾವೇಶಕ್ಕೆ ಅರ್ಥ ನೀಡಿದರು.


೫. ಆಗಮಿಸಿದ್ದ ಗಣ್ಯರು, ಕುಟುಂಬಗಳ ಹಿರಿಯರು ಸುಯೋಗ್ಯ ಮಾರ್ಗದರ್ಶನ ನೀಡಿದರು.
೬. ಶ್ರೀ ಸಾ.ಕ. ಕೃಷ್ಣಮೂರ್ತಿರವರ ಅಧ್ಯಕ್ಷತೆಯಲ್ಲಿ ಶ್ರೀಯುತರಾದ ಕ.ವೆಂ. ನಾಗರಾಜ್, ಕೆ. ಶ್ರೀಕಂಠ, ಬಿ.ಎನ್. ತ್ಯಾಗರಾಜ್, ಸಾ.ಕ. ಗೋಪಿನಾಥ್, ರಾಮಮೂರ್ತಿ. ಕೆ.ಎನ್. ಶಿವಪ್ರಸಾದ್, ಶ್ರೀಮತಿಯರಾದ ಕೆ.ವಿ. ಲಲಿತಾಂಬ, ಕಾಶೀಬಾಯಿ ಯವರುಗಳು ಒಳಗೊಂಡಂತೆ ಕಾರ್ಯಕಾರಿ ಸಮಿತಿ ರಚನೆಗೆ ಒಪ್ಪಲಾಯಿತು.
೭. ಕವಿ ಕುಟುಂಬದ ಪತ್ರಿಕೆಯೊಂದನ್ನು ಹೊರತರಲು ನಿರ್ಧರಿಸಿ ಶ್ರೀ ಕ.ವೆಂ. ನಾಗರಾಜ್ ಸಂಪಾದಕರು, ಶ್ರೀ ಕವಿ ಸುರೇಶ ಸಹ ಸಂಪಾದಕರಾಗಿರುವಂತೆ ಶ್ರೀಯುತರಾದ ಸಾ.ಕ.ಗೋಪಿನಾಥ್, ಶಿವಪ್ರಸಾದ್, ಎಂ.ಎಸ್. ನಾಗೇಂದ್ರ, ಕೆ. ವೆಂಕಟೇಶ ಜೋಯಿಸ್, ಶ್ರೀಕಂಠ ಮತ್ತು ಶ್ರೀಮತಿ ಶೈಲಜಾ ಪ್ರಭಾಕರ್ ರವರುಗಳು ಒಳಗೊಂಡಂತೆ ಪತ್ರಿಕಾ ಸಮಿತಿ ರಚನೆಗೆ ಒಪ್ಪಲಾಯಿತು.

ಉತ್ತಮ ಉಪಾಹಾರ, ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಧುರ ನೆನಪುಗಳೊಂದಿಗೆ ಬಂಧುಗಳು ವಿದಾಯ ಹೇಳಿದರು.                                     * * * * *  * * * * *
(ಡಿಸೆಂಬರ್, 2008ರ 'ಕವಿಕಿರಣ' ಪತ್ರಿಕೆಯ ವರದಿ ಆಧರಿಸಿದೆ).

3 comments:

  1. ಸುಂದರ ನೆನಪುಗಳು!

    ReplyDelete
  2. ಕೆಳದಿ ಕವಿ ಮನೆತನದ ದ್ವಿತೀಯ ವಾರ್ಷಿಕ ಸಮ್ಮೇಳನವನ್ನು ಖುದ್ದಾಗಿ ನೋಡಿದಷ್ಟೇ ಸಂತೋಷವಾಯಿತು. ತಮ್ಮ ಬಳಗಕ್ಕೆ ಶುಭಕೋರುತ್ತಿದ್ದೇನೆ, ಕವಿಗಳ-ಜ್ಞಾತರ ಸಂತತಿ ಸಾವಿರವಾಗಲಿ ಎಂದು ಹಾರೈಸುತ್ತಿದ್ದೇನೆ, ನಮಸ್ಕಾರ.

    ReplyDelete
  3. ನಿಮ್ಮ ಶುಭನುಡಿಗಳಿಗೆ ಧನ್ಯವಾದಗಳು. 26.12.2010 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಕವಿ ಮನೆತನದ 5ನೇ ವಾರ್ಷಿಕೋತ್ಸವ ಏರ್ಪಾಟಾಗಿದೆ. ಅಲ್ಲಿನ ಕೇವಲಾನಂದಾಶ್ರಮದಲ್ಲಿ. ಹರಿಹರಪುರ ಶ್ರೀಧರ್ ರವರು ಬರುವುದಾಗಿ ತಿಳಿಸಿದ್ದಾರೆ. ನಿಮಗೂ ಕೂಡ ಆತ್ಮೀಯ ಸ್ವಾಗತ.

    ReplyDelete