ರಾಗ || ಘಂಟಾರವ ತಾಳ || ಝಂಪೆ
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವ
ನೇಮವನೆ ಸ್ಥಿರನಿಜವ ಮಾಡೋ ರಾಮ
ರಾಮ ದಶರಥರಾಮ ಪಟ್ಟಾಭಿರಾಮ ರಘು
ರಾಮ ಸೀತಾಭಿರಾಮ ರಾಮ (ರಾಮ) || ಪ ||
ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮ
ಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮ
ಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮ
ಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ || 1 ||
ಹೆತ್ತ ತಾಯ ಮೊಲೆವಾಲನುಂಡುದಕೆ ಪಡಿಗಟ್ಟೆ ಸಪ್ತಶರನಿಧಿ ಸಾಲದೋ ರಾಮ
ಸತ್ತು ಹುಟ್ಟಿದ ದೇಹದಸ್ಥಿ ಗುಪಮಿಸೆ ಮೇರುಮಸ್ತ ಕಕ್ಕತ್ಯಧಿಕವೋ ರಾಮ
ಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮ
ಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನ್ನು ಕೊಟ್ಟು ಸಲಹೋ ರಾಮ || 2 ||
ತಂದೆತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮ
ಮುಂದುಗಾಣದೆ ಬಹು ಮದಾಂಧತನದಲಿ ನಡೆದು ಮಂದಮತಿಯಾಗಿದ್ದೆನೋ ರಾಮ
ಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮ
ಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ || 3 ||
NICE ! forwarding of good old lyrics !
ReplyDeleteMany thanks Mr.Bhat.
ReplyDelete