ಶಿವಮೊಗ್ಗ ಜಿಲ್ಲೆ ಸಾಗರದ ಗಣಪತಿ ದೇವಸ್ಥಾನದ ಬೀದಿಯಲ್ಲಿದ್ದ ಒಂದು ಮನೆಯಲ್ಲಿ ಕೆಳದಿ ಕವಿಮನೆತನದ 5ನೆಯ ಪೀಳಿಗೆಯ ಕವಿ ಕೃಷ್ಣಪ್ಪ - ಸುಬ್ಬಮ್ಮ ದಂಪತಿಗಳು ವಾಸವಿದ್ದರು. ಆ ಮನೆ ಈಗ ಹೀಗಿದೆ. ಈ ಮನೆಯನ್ನು ಕವಿಕುಟುಂಬದವರು ಶ್ರೀ ವೆಂಕೋಬರಾವ್ ಬಾಪಟ್ ಎಂಬುವವರಿಗೆ ಹಿಂದೆ ಮಾರಿದ್ದು, ಈಗ ಈ ಮನೆಯಲ್ಲಿ ಅವರ ಮಗ ಶ್ರೀ ಕೇಶವರಾವ್ ಬಾಪಟ್ ವಾಸವಾಗಿದ್ದಾರೆ. ಕವಿ ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳ ಬಗ್ಗೆ ಮಾಹಿತಿಯನ್ನು ಡಿಸೆಂಬರ್, 2010ರ 'ಕವಿಕಿರಣ' ಸಂಚಿಕೆಯಲ್ಲಿ ನಿರೀಕ್ಷಿಸಿರಿ.
ಈಗ ಈ ಮನೆಯಲ್ಲಿ ವಾಸವಿರುವ ಶ್ರೀ ಕೇಶವರಾವ್ ಬಾಪಟ್ ರವರು.
-ಕವಿನಾಗರಾಜ್.
ಕವಿ ನಾಗರಾಜ ಅವರೇ,
ReplyDeleteನೀವು ಚಿತ್ರದಲ್ಲಿ ಕಾಣಿಸಿರುವ ಮನೆಯನ್ನು ಸಾಗರದಲ್ಲಿ ನಾನು ನೋಡಿದ್ದೇನೆ. ನಾವು ಸಾಗರದಲ್ಲಿ ಇದ್ದಾಗ ಅಲ್ಲಿಗೆ ಹೋಗುತ್ತಿದ್ದೆ.ಅಲ್ಲಿ ಡಾ. ಶ್ರೀಪಾದರಾವ್ ಬಾಪಟ್ ಅಂತ ಇದ್ದರು. ತುಂಬಾ ಒಳ್ಳೆ ಜನ. ಅವರಿಗೆ ವಿದ್ಯುತ್ ಕಛೇರಿ ಹಿಂಭಾಗದಲ್ಲಿ ಕೆಲವು ಮನೆಗಳಿದ್ದವು. ತುರ್ತು ಪರಿಸ್ತಿತಿಯಲ್ಲಿ ವಕೀಲ್ ಪುಟ್ಟಸ್ವಮಿಯವರಿಗೆ ಮಾರಿದ್ದರು.ಅದರಲ್ಲಿ ಒಂದನ್ನು ಬಾಡಿಗೆಗೆ ಕೊಟ್ಟಿದ್ದರು. ಬಾಡಿಗೆ ಹನ್ನೆರಡು ರೂಗಳು ತಿಂಗಳಿಗೆ.(೧೯೬೧-೬೫ ರಲ್ಲಿ). ಅವರ ಮಗ ಡಾ||....... ಬಾಪಟ್ ಹಾಸನದಲ್ಲಿ ಇದ್ದರು.ಕುದುರಗುಂಡಿಯಲ್ಲಿ ಕೆಲಸ ಇತ್ತು. ಇನ್ನೊಬ್ಬ ಮಗ ಅವರ ಮನೆ ಎದುರು ಕನ್ನಡಕದ ಅಂಗಡಿ ತೆಗೆದಿದ್ದರು.ಶ್ರೀ ಕೇಶವರಾವ್ ಬಾಪಟ್ ಸಹ ಅವರ ಮಗ ಇರಬಹುದು.ಒಮ್ಮೆ ವಿಚಾರಿಸಿ ಅವರಿಗೆ ನೆನಪಿರಬಹುದು
ಕೌಲವೆಂ
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು,ವೆಂಕಟಸುಬ್ಬಯ್ಯನವರೇ. ಸಾಗರಕ್ಕೆ ಹೋದ ಸಂದರ್ಭದಲ್ಲಿ ವಿಚಾರಿಸುವೆ.
ReplyDeleteಚಿತ್ರಗಳು ಚೆನ್ನಾಗಿ ಬಂದಿದೆ. ದಾಖಲಿಸಲೇ ಬೇಕಾದ ಮುಖ್ಯ ವಿಚಾರ.
ReplyDelete