ಬಂಧುಗಳೇ,
ಕೆಳದಿ ಕವಿಮನೆತನಕ್ಕೆ ಸೇರಿದ ನಾವು ಹೆಮ್ಮೆಪಡಲು ಹಲವಾರು ಕಾರಣಗಳಿವೆ. ಸುಮಾರು 12 ತಲೆಮಾರುಗಳ ವಿವರವಿರುವ ವಂಶವೃಕ್ಷ ಹೊಂದಿರುವುದಲ್ಲದೆ ನಮ್ಮ ಹಿರಿಯರು, ಪೂರ್ವಜರು ಜೀವನದ ಹಲವಾರು ರಂಗಗಳಲ್ಲಿ ಹಿರಿಮೆ, ಗರಿಮೆ ಮೆರೆದವರು. ಅವರ ಸಾಲಿನಲ್ಲೇ ಪ್ರಚಲಿತ ಕುಟುಂಬಗಳ ಸದಸ್ಯರುಗಳೂ, ಬಂಧುಗಳೂ ಸಹ ಮುಂದುವರೆಯುತ್ತಿರುವುದು ಅಭಿನಂದನೀಯ ಸಂಗತಿಯಾಗಿದೆ. ಸಂಬಂಧಿಸಿದ ಕುಟುಂಬಗಳವರು, ಬಂಧುಗಳು ಈ ತಾಣದಲ್ಲಿ ಪಾಲ್ಗೊಂಡು ತಮ್ಮ ಲೇಖನಗಳು, ಅನುಭವಗಳು, ಪ್ರತಿಕ್ರಿಯೆಗಳು, ಭಾವಚಿತ್ರಗಳು, ಇತ್ಯಾದಿಗಳನ್ನು ಹಂಚಿಕೊಳ್ಳಲು ವಿನಂತಿಸುವೆ.
ತಮ್ಮವ - ಕ.ವೆಂ.ನಾಗರಾಜ್.
No comments:
Post a Comment