ಸಾಗರದ ಕವಿ ಲಿಂಗಣ್ಣಯ್ಯನವರು (೧೮೭೯-೧೯೪೩) ಕವಿ ಕೃಷ್ಣಪ್ಪ ಮತ್ತು ಸುಬ್ಬಮ್ಮನವರ ಪುತ್ರ. ಇವರದು ಬಹುಮುಖ ಪ್ರತಿಭೆ. ವಿಶೇಷವಾಗಿ ಚಿತ್ರಕಲೆಯ ಜೊತೆಗೆ ಆಡಳಿತ, ಸಂಗೀತ, ಫೋಟೋಗ್ರಫಿ ಮುಂತಾದ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಪ್ರತಿಭೆಯನ್ನು ಹೊರಸೂಸಿದವರು. ಅವರ ಆತ್ಮ ಚರಿತ್ರೆಯನ್ನು (ಆಂಗ್ಲ ಭಾಷೆಯಲ್ಲಿ) 'ಕರ್ಮಯೋಗಿ - ಕಲಾ ವಲ್ಲಭ - ಎಸ್.ಕೆ.ಲಿಂಗಣ್ಣಯ್ಯ' ಎಂಬ ಶೀರ್ಷಿಕೆಯಲ್ಲಿ ಕವಿ ಸುರೇಶ್ ರವರು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಅದರ ರಕ್ಷಾಪುಟಗಳು ಮತ್ತು ಪರಿಚಯ ಭಾಗವನ್ನು ಇದರಲ್ಲಿ ನೀಡಲಾಗಿದೆ.
ಪುಟಗಳು: 106 + 8 : ಪ್ರಕಟಣಾ ವರ್ಷ: 2007 :ಬೆಲೆ: ರೂ.80/-
ಪ್ರಕಾಶಕರು: ಕವಿ ಪ್ರಕಾಶನ, ಶಿವಮೊಗ್ಗ:
ಲೇಖಕರು:
ಕವಿ ಸುರೇಶ್
ಪ್ರಕಾಶಕರು: ಕವಿ ಪ್ರಕಾಶನ, ಶಿವಮೊಗ್ಗ:
ಲೇಖಕರು:
ಕವಿ ಸುರೇಶ್
"ಕೆಳದಿ ಸಂಸ್ಥಾನದ ಆಸ್ಥಾನ ಕವಿ ಕೆಳದಿ ಲಿಂಗಣ್ಣಯ್ಯನವರ ವಂಶಸ್ಥರಾದ ಎಸ್.ಕೆ.ಲಿಂಗಣ್ಣಯ್ಯ [1879-1943]ನವರು ಹಳೆಯ ಮೈಸೂರು ಸಂಸ್ಥಾನದಲ್ಲಿ ಅಧಿಕಾರಿಗಳಾಗಿದ್ದುದರ ಜೊತೆಗೆ ಸಂಗೀತ ಮತ್ತು ಮುಖ್ಯವಾಗಿ ಚಿತ್ರ ನಿರ್ಮಾಣ ಭೂಪಟಗಳ [map] ಕಲೆಯನ್ನು ಮೈಗೂಡಿಸಿಕೊಂಡಿದ್ದ ಪ್ರತಿಭಾಶಾಲಿಗಳು. ಇತಿಹಾಸದ ಗರ್ಭದಲ್ಲಿ ಅಡಗಿ ಹೋಗಬಹುದಾಗಿದ್ದ ಇಂತಹ ಪ್ರತಿಭಾವಂತರ ಜೀವನ-ಸಾಧನೆಯ ವಿವರಗಳು ಮುಂದಿನ ತಲೆಮಾರಿಗೆ ಮಾರ್ಗದರ್ಶನ ಮಾಡಿ ಸ್ಫೂರ್ತಿ ನೀಡಬೇಕಾದುದು ತುಂಬಾ ಅಗತ್ಯ.
ಕವಿಯ ವಂಶಸ್ಥರಾದ ಶಿವಮೊಗ್ಗದ ಕವಿ ವೆಂ||ಸುರೇಶ್ ರವರು ಬಹಳ ಪರಿಶ್ರಮದಿಂದ ಹಿಂದಿನ ವಿವರಗಳನ್ನು ಹುಡುಕಿ ತೆಗೆದು ಈ ರೀತಿಯ ಗ್ರಂಥಗಳ ಮೂಲಕ ತಮ್ಮ ವಂಶದ ಸಾಧಕ ಶ್ರೇಷ್ಠರ ಪರಿಚಯ ಮಾಡಿಕೊಡುತ್ತಿರುವುದು ಅಭಿನಂದನೀಯ. ಒಂದು ಪರಿಚಯ ಗ್ರಂಥ ಹೇಗಿದ್ದರೆ ಚೆನ್ನ? ಅದರಲ್ಲಿ ಏನೆಲ್ಲ ವಿವರಗಳಿದ್ದರೆ ಒಳ್ಳೆಯದು? ಎಂಬುದಕ್ಕೆ ಒಂದು ಉತ್ತಮ ಮಾದರಿಯಂತಿದೆ ಈ ಪುಸ್ತಕ."
- ಹರಿಹರಪುರ ಬಿ.ಸುಬ್ರಹ್ಮಣ್ಯಂ
ಸಂಪಾದಕರು, "ಸ್ವಯಂಪ್ರಕಾಶ"
ಮಾಸಪತ್ರಿಕೆ [ಜುಲೈ 2008]
********** ************
"The publication of this book, which is the brain-child of Kavi Suresh is a detailed biography of an eminent person in Kavi family, Sagarada Kavi Lingannaiya, my father. Shri Suresh has taken great pains to collect lot of information and materials from various sources, compiled them and brought out this beautiful book in a very fitting manner. This shows the interest and regard he has towards his ancestors. This book also reveals the enormous art talents of the Kavi family which, but for this book, would have been lost sight of in history.
I sincerely commend his ability and efforts in this regard and pray for the blessings of our fore-fathers on him."
- S.K.KRISHNAMURTHY
BANGALORE
********** ************
"Our beloved grand father, late S.K.Lingannaiya was an eminent artist par-excellence. Many of his invaluable works such as Chitra Ramayana, Chitra Bhagavatha, Gitopadesha, Vayustuti Maruthi, the Guardian Angel of British Empire etc., have all been preserved in the Keladi Museum.
Normally, erudition goes against brevity. But the learned author, Sri Kavi Suresh has managed to bring together essential facts of Lingannaiya's life and life-time achievements vis-a-vis its relevance to common people within a brief compass. I believe that this publication on Lingannaiya would be a valuable addition to the literature pertaining to Keladi Kavi family. I congratulate the author for a task well done."
- K. GUNDA JOIS, KELADI.
114 ಪುಟಗಳ 13 ಅಧ್ಯಾಯಗಳ ಈ ಪುಸ್ತಕ ಮಹಾನ್ ಸಾಧಕನ ಜೀವನ ಮತ್ತು ಕೃತಿಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದೆ. ಇತರರಿಗೆ ಪ್ರೇರಣಾದಾಯಿಯಾಗಿದೆ.
ReplyDelete