ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಿಂದ ಸುಮಾರು 8-10 ಕಿ.ಮೀ. ದೂರದಲ್ಲಿದೆ ಕೆಳುವೆ ಗ್ರಾಮ. ಅಲ್ಲಿನ ಈಶ್ವರ ದೇವಸ್ಥಾನದ ಅರ್ಚಕರಾಗಿರುವ ಗೋಪಾಲರವರನ್ನು (ಕವಿ ವೆಂಕಟಸುಬ್ಬರಾಯರ ತಂಗಿ ಸೀತಮ್ಮನವರ ಮಗ) ಮಾತನಾಡಿಸಲು ಹಾಗೂ ದೇವಾಲಯ ನೋಡಲು ಕೆಲವು ತಿಂಗಳ ಹಿಂದೆ ಹೋಗಿದ್ದಾಗ ತೆಗೆದ ಚಿತ್ರಗಳು:
ಈಶ್ವರ ದೇವಾಲಯದ ಮುಂಭಾಗ ಹಾಗೂ ಅರ್ಚಕ ಶ್ರೀ ಗೋಪಾಲ
ದೇವಾಲಯದಲ್ಲಿರುವ ಆಕರ್ಷಕ ಬೃಹತ್ ಈಶ್ವರ ಲಿಂಗ
ಅರ್ಚಕರ ನಿವಾಸ
ಅರ್ಚಕರ ನಿವಾಸದಲ್ಲಿ ಕುಶಲೋಪರಿ
ಗೋಪಾಲ ದಂಪತಿಗಳು, ರೇಣುಕಾ ಸುರೇಶ್, ಸಾವಿತ್ರಮ್ಮ ರಾಮಮೂರ್ತಿ, ಭಾರತಿನಾಗರಾಜ್,
ಕೆಳದಿ ರಾಮಮೂರ್ತಿ, ಕವಿನಾಗರಾಜ್, ಕೆಳದಿ ವೆಂಕಟೇಶ ಜೋಯಿಸ್, ಕವಿ ಸುರೇಶ್.
ಕೆಳದಿ ರಾಮಮೂರ್ತಿಯವರ ಸಹಕಾರದಿಂದ ಗೋಪಾಲ ದಂಪತಿಗಳು ಇಲ್ಲಿ ನೆಲೆಸಿದ್ದು ಗ್ರಾಮಸ್ಥರ ನೆರವಿನಿಂದ ದೇವಸ್ಥಾನ ಅಭಿವೃದ್ಧಿ ಕಾಣುತ್ತಿದೆ, ಕಾಣಬೇಕಿದೆ.
-ಕವಿನಾಗರಾಜ್.
ಶ್ರೀ ನಾಗರಾಜ್ ಮತ್ತು ಸುರೇಶ್,
ReplyDeleteಕೆಳದಿ ಕವಿ ಮನೆತನಕ್ಕೆ ಸೇರಿದ ನಿಮ್ಮಿಂದ ಸಾಕಷ್ಟು ಸಾಹಿತ್ಯಸೇವೆ ನಡೆಯುತ್ತಿದ್ದು ಮನೆತನದ ಗೌರವವನ್ನು ಉಳಿಸಿ ಬೆಳೆಸುತ್ತಿದ್ದೀರಿ. ನಿಮ್ಮ ಸಾಹಿತ್ಯಸೇವೆ ನಿರಂತರವಾಗಿ ನಡೆಯುತ್ತಿರಲಿ, ಈಗಿನ ಪೀಳಿಗೆಗೆ ನಮ್ಮ ಸಂಸ್ಕೃತಿ-ಪರಂಪರೆಯನ್ನು ಪರಿಚಯಿಸುವ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲೆಂದು ಮನದಾಳದಿಂದ ಆಶಿಸುವೆ.
ಶ್ರೀಧರ್, ನಿಮ್ಮ ಹಾರೈಕೆಗಾಗಿ ವಂದನೆಗಳು.
ReplyDeleteನಾನೂ ದನಿಗೂಡಿಸುವೆ. ವಂದನೆಗಳು, ಶ್ರೀಧರ್ ರವರೇ.
ReplyDelete