ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, November 1, 2010

ಯಾವ ವೈದ್ಯರೂ ಮಾಡದ ಚಿಕಿತ್ಸೆಯನ್ನು ಆಪ್ತ ಸಮಾವೇಶ ಮಾಡಬಲ್ಲುದು

ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ' ಮತ್ತು ಕುಟುಂಬ ಸಮಾವೇಶದ ಬಗ್ಗೆ ಹಾಸನದ ಚಿಂತನಶೀಲ ಲೇಖಕ ಹರಿಹರಪುರ ಶ್ರೀಧರ ಕಳುಹಿಸಿದ ಮಿಂಚಂಚೆಯನ್ನು ಯಥಾವತ್ ನಕಲು ಮಾಡಿ ಕೆಳಗೆ ಪ್ರಕಟಿಸಿದೆ:

    ನಮ್ಮ ಸುತ್ತ-ಮುತ್ತ ಜನರ ನಿತ್ಯದ ಮಾತು-ಕತೆಯ ಒಂದಿಷ್ಟು ಸ್ಯಾಂಪಲ್ ನೋಡಿ-            "ಕಾರು-ಬಂಗ್ಲೆ, ಚಿನ್ನದಸರ-ಬಳೆ, ಟಿ.ವಿ-ಫ್ರಿಜ್ಜು.......ಜೊತೆಗೆ ಬಿ.ಪಿ-ಶುಗರ್-ಕ್ಯಾನ್ಸರ್...........ಡಯಾಲಿಸಿಸ್, ಹಾರ್ಟ್ ಸರ್ಜರಿ"  " ನನ್ನ ಮಗ ಸಾಫ್ಟ್ ವೇರ್ ಇಂಜಿನಿಯರ್ , ನನ್ನ ಮಗಳು  ಡಾಕ್ಟರ್"  " ಯಾರೋ ಲವ್ ಮಾಡಿದ್ರಂತೆ, ಇಂಟರ್ ಕ್ಯಾಸ್ಟ್ ಮದ್ವೆ ಆಯ್ತಂತೆ, ಡೈವರ್ಸ್ ಆಯ್ತಂತೆ, ಅವರ ಅಪ್ಪ-ಅಮ್ಮ  ವೃದ್ಧಾಶ್ರಮ ಸೇರಿದ್ರಂತೆ"
                  ಸಾಮಾನ್ಯವಾಗಿ ಇದಕ್ಕೆ ಹೊರತಾದ ಮಾತು-ಕತೆ  ಅಪರೂಪ ಅಲ್ವಾ? ನಮ್ಮ ಆರೋಗ್ಯ ಹದಗೆಟ್ಟು  ಹಾಳಾಗಿ ಹೋಗಿದ್ರೂಟಿ.ವಿ-ಇಂಟರ್ ನೆಟ್ ನೋಡಿಕೊಂಡು ಮಕ್ಕಳು  ರಾಕ್ಷಸರಂತೆ ಬೆಳೀತಿದ್ರೂ   ತೆಪ್ಪಗೆ ಮೌನವಾಗಿ ಕುಳ್ತಿರೋ  ನಮ್ಮ ಸಮಾಜದ ದು:ಸ್ಥಿತಿ ಕಂಡು ದು:ಖವಾಗುತ್ತೆ. ಒಂದು ರೀತಿಯ ನಿರಾಶಾಭಾವ ಮೂಡುತ್ತದೆ. ನಮ್ಮ ಸಮಾಜದ ಕತೆ ಇಷ್ಟೇನಾ ಅನ್ನಿಸುತ್ತದೆ.

                  ಆದರೆ ಕವಿಕಿರಣ ದಂತಾ  ಪ್ರಯತ್ನಗಳನ್ನು ನೋಡಿದಾಗ ಎಲ್ಲೋ ಒಂದು ಕಡೆ ಆಶಾಕಿರಣ ಮೂಡುತ್ತದೆ. ನಮಗೆಲ್ಲಾ ಜನ್ಮ ಕೊಟ್ಟ ತಾಯಿ ಭಾರತಿ ಬಂಜೆಯಲ್ಲ. ಸಹಸ್ರಾರು ಮಂದಿ ಸಾದು ಸಂತರು, ಋಷಿ-ಮುನಿಗಳ ತಪಸ್ಸಿನಿಂದ ಪುನೀತವಾಗಿರುವ ನೆಲದಲ್ಲಿ ಧರ್ಮಕ್ಕೆ ಚ್ಯುತಿ ಬರಲು ಸಾಧ್ಯವಿಲ್ಲ. ಎಲ್ಲವೂ ನಿರ್ನಾಮ ವಾಯಿತೆನ್ನುವ ಹೊತ್ತಿಗೆ ಒಬ್ಬ ಮಹಾಪುರುಷನು ಎದ್ದು ಬಂದಿರುವುದನ್ನು ನಮ್ಮ  ಇತಿಹಾಸದಲ್ಲಿ ನೋಡಬಹುದಾಗಿದೆ.
                       ಮನೆತನದ ಸೊಗಡನ್ನು ಉಳಿಸಿ-ಬೆಳೆಸುವ  ನಿಮ್ಮಗಳೆಲ್ಲರ ಶ್ರಮವು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ. ಎಷ್ಟೇ ಸಿರಿವಂತಿಕೆ ಇದ್ದರೂ  ಅದನ್ನು ಸಂತಸದಿಂದ ಅನುಭವಿಸಲು " ನಮ್ಮವರೆನ್ನುವವರು ನಮ್ಮೊಡನೆ ಇರಬೇಕು" ವರ್ಷದಲ್ಲಿ ಒಮ್ಮೆ ಯಾದರೂ ಒಂದೆರಡುದಿನಗಳು  ನಮ್ಮ ನಮ್ಮ ಸ್ವಂತ ವ್ಯವಹಾರವನ್ನು ಬದಿಗಿರಿಸಿ, ಎಲ್ಲವನ್ನೂ ಮರೆತು ನಮ್ಮವರೆನಿಸಿದ ಎಲ್ಲರೊಡನೆ  ಕುಣಿದು ಕುಪ್ಪಳಿಸಬೇಕುಇಂದು ಎಲ್ಲೆಡೆ ಕಾಡುತ್ತಿರುವ ಟೆನ್ಷನ್ ಗಳಿಗೆ ಇದೊಂದೇ ಪರಿಹಾರ. ಯಾವ ವೈದ್ಯರೂ ಮಾಡಲಾಗದ ಚಿಕಿತ್ಸೆಯನ್ನು ಒಂದು ಆಪ್ತ ಸಮಾವೇಶ ಮಾಡಬಲ್ಲದು. ಮುಂದಿನ ಕವಿ ಮನೆತನದ ಸಮಾವೇಶದಲ್ಲಿ ನಾನು ಡಾಕ್ಟರ್, ನಾನು ಉಧ್ಯಮಿ, ನಾನು ಆಗರ್ಭ ಶ್ರೀಮಂತ, ಛೇ! ನಾನು ಬಡವ, ನಾನು  ಡಾಕ್ಟರೇಟ್ ಮಾಡಿದವನು, ಛೇ! ನಾನು ಸಾಮಾನ್ಯ ಗುಮಾಸ್ತ! ಎಲ್ಲಾ  ನಾನುಗಳನ್ನು ಅಂದಿನ ಮಟ್ಟಿಗಾದರೂ ಬದಿಗಿರಿಸಿ ಎಲ್ಲರೊಂದಿಗೆ ಬೆರೆತು ನನ್ನ ನಾ ಮರೆತಾಗ ನಿಜವಾಗಲೂ "ಸಮಾವೇಶವು ಸಾರ್ಥಕವಾಗುತ್ತದೆ" ಎಲ್ಲರೂ ಮುಂದಿನ ಸಮಾವೇಶವನ್ನು ಎದಿರು ನೋಡುವಂತಾಗುತ್ತದೆ.

5 comments:

  1. ಶ್ರೀದರ್ ರವರ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ. ಕೆಲವೇ ಮಂದಿ ಎಷ್ಟೇ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಕೂಡ ಎಲ್ಲರೂ ಸಮಾನ ಮನಸ್ಕರಾಗಿ ತಮ್ಮನ್ನು ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಇಂತಹ ಪ್ರಯತ್ನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು. ಆ ಆಶಯದಲ್ಲಿಯೇ ನಾವು ಕಾರ್ಯನಿರತರಾಗಿದ್ದೇವೆ. ಉದ್ದೇಶ ಮತ್ತು ಗುರಿ ಒಳ್ಳೆಯದಾದ್ದರಿಂದ ಕಾಲಕ್ರಮೇಣ ಈ ಪ್ರಯತ್ನಗಳು ಎಲ್ಲರ ಪಾಲ್ಗೊಳ್ಳುವಿಕೆಯಿಂದ ಇನ್ನಷ್ಟು ಗರಿಗೆದರುವುದರಲ್ಲಿ ಸಂಶಯವಿಲ್ಲ.
    ಶ್ರೀಧರ್ ರವರ ತೆರೆದ ಮನದ ಸ್ಫಂದನೆಗೆ ನಾವೆಲ್ಲಾ ಆಭಾರಿ.

    ReplyDelete
  2. ಏನಿದು ನಾಗರಾಜ್, ನಾನು ಸುಮ್ನೆ ಏನೋ ಗೀಜಿದ್ದನ್ನು ಬ್ಲಾಗಲ್ಲಿ ಹಾಕಿಬಿಟ್ಟೀದ್ದೀರಲ್ಲಾ! "ಚಿಂತನ ಶೀಲ,ಚಿಂತಕ " ಈ ಪದಗಳ ಅರ್ಥವನ್ನೇ ನಾನಿನ್ನೂ ತಿಳಿದುಕೊಂಡಿಲ್ಲ,ನೀವು ನನ್ನನ್ನು ಆಟ್ಟಕ್ಕೇರಿಸಿಬಿಟ್ಟಿದ್ದೀರಿ.ನಾನು ಒಬ್ಬ ಭಾವಜೀವಿ ಎಂದು ಒಪ್ಪಿಕೊಳ್ಳಬಲ್ಲೆ. ಅದೇ ನನ್ನ ಬಂಡವಾಳ. ಅದು ಬಿಟ್ರೆ ಝೀರೋ.

    ReplyDelete
  3. ಶ್ರೀಧರ, ನೀವು ಚಿಂತನಶೀಲರು ಹಾಗೂ ಒಳ್ಳೆಯ ಲೇಖಕರು ಎಂಬುದರಲ್ಲಿ ನನಗಂತೂ ಅನುಮಾನ ಬಂದಿಲ್ಲ. ನಿಮಗೆ ಬಂದಿದ್ದರೆ ಅದು ನನಗೆ ಸಂಬಂಧಪಟ್ಟಿದ್ದಲ್ಲ.

    ReplyDelete
  4. ನಿಮ್ಮ ಬ್ಲಾಗಿಗೆ ಶುಭಕೋರುತ್ತಿದ್ದೇನೆ. ನಿಮ್ಮೆಲ್ಲರಿಂದ ಅನೇಕ ಬರಹಗಳು ಬರಲಿ, ಕವಿಮನೆತನದ ಸೊಗಡು, ಸೊಬಗು ಎಲ್ಲೆಡೆ ತನ್ನತನವನ್ನು ಬಿಂಬಿಸಲಿ ಎಂದು ಆಶಿಸುತ್ತೇನೆ. ಕೃತಿಗಳು ಸಾರ್ವಕಾಲಿಕವಾಗಿದ್ದು ಬಹಳಜನರಿಗೆ ಉಪಯುಕ್ತವಾಗಲಿ ಎಂದು ಬಯಸುತ್ತೇನೆ, ಧನ್ಯವಾದಗಳು

    ReplyDelete
  5. ಭಟ್ ರವರಿಗೆ ಧನ್ಯವಾದಗಳು. ನಿಮ್ಮ ಆಶಯದಂತೆಯೇ ಖಂಡಿತ ಮುಂದುವರೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ನಿಮ್ಮ ಸಹಕಾರವೂ, ಸಲಹೆ-ಸೂಚನೆಗಳೂ ಸದಾ ನಮಗಿರಲಿ. ದೀಪಾವಳಿಯ ಶುಭಾಶಯಗಳು,

    ReplyDelete