ರಾಗ: ತೋಡಿ : ಝಂಪೆ ತಾಳ
ಇನ್ನೇನು ಗತಿ ಎನಗೆ ಈ ಉದರ ಪೋಷಣಕೆ
ಇನ್ನೇನು ಗತಿ ಎನಗೆ ಈ ಉದರ ಪೋಷಣಕೆ
ನಿನ್ನ ಸೇವೆಯನಿತ್ತು ಸಲಹೋ ರಾಮೇಶ || ಪ ||
ಊರೂರ ತಿರುಗಿ ಭಿಕ್ಷವ ಬೇಡಲಾರೆ ನಾಂ-
ಘೋರ ವಿಷವನು ಮೊದಲೆ ಕುಡಿಯಲಾರೆ
ನೀರ ಹೊರಲಾರೆ ಬಾಗಿಲು ಕಾಯಲಾರೆ || 1 ||
ಧರಿಸುವರೆ ವಸ್ತ್ರವಿಲ್ಲದೆ ಲೋಕದೊಳ್ ದಿಗಂ-
ಬರನಾಗಿ ನಿನ್ನಂತೆ ಚರಿಸಲಾರೆ
ಕರಿವ್ಯಾಘ್ರ ಚರ್ಮವನು ಪೊದೆದು ವರ್ತಿಸಲಾರೆ
ಧರೆಯರಿಯೆ ನಟನಾಗಿ ಕುಣಿದಾಡಲಾರೆ || 2 ||
ಚಲ್ಲೆದ್ದು ಕುಂಟಣಿತನವ ರಚಿಸಲಾರೆ ನಾ
ಮಲ್ಲಗಾಳಗವ ನಾ ಮಾಡಲಾರೆ
ಕಲ್ಲೆದೆಯದೇಕೋ ಕೆಳದಿಯ ಪುರಾಧೀಶ್ವರನೆ
ಫುಲ್ಲಶರಮದ ಭಂಗ ರಾಮಲಿಂಗೇಶ || 3 ||
No comments:
Post a Comment