ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, November 28, 2010

ಹೂವ ಬೇಡಿದ ಹಾಡು

ರಾಗ|| ಕಮಾಚ್                     ತಾಳ: ಮಿಶ್ರಛಾಪು

ಹೂವ ಕೊಡೆ ದೇವಿ | ಹೂವ ಕೊಡೆ
ಯಾವಾಗಲೂ ನಿಮ್ಮ ಸಿರಿ ಮುಡಿಯುಳಗಿರ್ಪ                             || ಪ ||

ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿ
ಪರಿಪರಿ ಧೂಪಧೂಮಗಳನಿಕ್ಕಿ
ಪರಿಮಳಿಸುವ ಸಂಪಿಗೆಯ ಪೂಸರವ ಸಿಂ-
ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ                                || 1 ||

ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆ
ಸರಸಿಜ ಮೊದಲಾದ ಕುಸುಮದಿಂದ
ಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪ
ಅರಳಿದ ಮಲ್ಲಿಗೆ ಹೂವ ಕೊಡೆ ಹೂವ                                        || 2 ||

ವ್ಯೋಮಗಂಗೆಯಯೊಳಿಂದ ಹೇಮದಾಮರಸವ
ಕಾಮಿನಿಯರು ಕೊಯ್ ತಂದದನು
ಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-
ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ                   || 3 ||

ಮುತ್ತಿನ ಲಹರಿಯ ರತ್ನದ ರಾಗಟೆಯ
ಸುತ್ತುಮುತ್ತಲೂ ರಾರಾಜಿಸುವ
ಪುತ್ಥಳಿಯ ಚಿನ್ನದಂತೆ ಘಮಘಮಿಸುವ
ಉತ್ತಮವಾದ ಸುವರ್ಣದ ಕೇದಗೆ ಹೂವ                                  || 4 ||

3 comments:

  1. ಮಿಶ್ರಛಾಪು ಯಕ್ಷಗಾನದಲ್ಲಿ ಬಳಕೆಯಲ್ಲಿಲ್ಲ. ಇದ್ದರೂ ಬೇರೆ ಹೆಸರಿರಬಹುದು. ಇಮಗೆ ಈ ತಾಳದಬಗ್ಗೆ ತಿಳಿದಿದ್ದರೆ ತಿಳಿಸಿ.

    ReplyDelete
  2. ಇಂದಷ್ಟೇ ನಿಮ್ಮ ಬರಹವನ್ನು ನೋಡಿದೆ. ತಾಳದ ಬಗ್ಗೆ ವಿವರ ಸದ್ಯದಲ್ಲಿಯೇ ತಿಳಿಸುವೆ.

    ReplyDelete
  3. ಮಿಶ್ರಛಾಪು ತಾಳ:[ಕರ್ನಾಟಕ ಶಾಸ್ತ್ರೀಯ ಸಂಗೀತ]

    7 ಅಕ್ಷರಗಳು : 123 - 1234 (ತಕಿಟ - ತಕಧಿಮಿ)

    ReplyDelete